Class 10 Social Textbook Solutions

ಭಾರತದ ಖನಿಜ ಹಾಗೂ ಶಕ್ತಿ ಸಂಪನ್ಮೂಲಗಳು – ೧೦ ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ಭಾರತದ ಖನಿಜ ಹಾಗೂ ಶಕ್ತಿ ಸಂಪನ್ಮೂಲಗಳು 
II ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ,

1. ಗಣಿಗಾರಿಕೆ ಎಂದರೇನು?

ಭೂಮಿಯಿಂದ ಖನಿಜಗಳನ್ನು ಹೊರತೆಗೆಯುವ ಕಾರ್ಯವನ್ನು ‘ಗಣಿಗಾರಿಕೆ’ ಎನ್ನುವರು
2. ಭಾರತದಲ್ಲಿ ಅತ್ಯಧಿಕ ಕಬ್ಬಿಣದ ಅದಿರು ಉತ್ಪಾದಿಸುವ ರಾಜ್ಯ ಯಾವುದು?
ಒಡಿಶಾ
3. ಪ್ರಮುಖವಾದ ಮಿಶ್ರಲೋಹ ಖನಿಜ ಯಾವುದು?
ಮ್ಯಾಂಗನೀಸ್ ಅದಿರು
4. ಅಲ್ಯೂಮಿನಿಯಂ ಲೋಹ ತಯಾರಿಕೆಗೆ ಅಗತ್ಯವಾದ ಮುಖ್ಯ ಕಚ್ಚಾವಸ್ತು ಯಾವುದು?
ಪ್ರಮುಖ ಆಲೋಹ ಖನಿಜ
5. ಭಾರತದಲ್ಲೇ ಅತಿ ಹೆಚ್ಚು ಆಬ್ರಕ ಉತ್ಪಾದಿಸುವ ರಾಜ್ಯ ಯಾವುದು?
ಆಂಧ್ರ ಪ್ರದೇಶ
6. ‘ಶಕ್ತಿ ಸಂಪನ್ಮೂಲಗಳು’ ಎಂದರೇನು?
ವಿದ್ಯುಚ್ಛಕ್ತಿ ಉತ್ಪಾದನೆಗೆ ಅಗತ್ಯವಾಗಿರುವ ಸಂಪನ್ಮೂಲಗಳನ್ನು ‘ಶಕ್ತಿ ಸಂಪನ್ಮೂಲಗಳು’ ಎನ್ನುವರು
7. ಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳನ್ನು ಹೆಸರಿಸಿ
ಕಲ್ಲಿದ್ದಲು, ಪೆಟ್ರೋಲಿಯಂ, ನೈಸರ್ಗಿಕಾನಿಲ
8. ಅಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳನ್ನು ಹೆಸರಿಸಿ
ಸೌರಶಕ್ತಿ, ಪವನಶಕ್ತಿ, ಉಬ್ಬರವಿಳಿತ ಶಕ್ತಿ, ಭೂಗರ್ಭಶಕ್ತಿ, ಜೈವಿಕ ಅನಿಲ
9. ಕಲ್ಲಿದ್ದಲಿನಿಂದ ದೊರೆಯುವ ಉಪವಸ್ತುಗಳು ಯಾವುವು?
ಅಮೋನಿಯ, ಕೋಲ್ಟಾ, ಕೋಲ್ಗ್ಯಾಸ್, ಬೆಂಜಾಲ್, ನ್ಯಾಪ್ತ, ಸಲ್ಫರ್
10. ಹೈಡೋಕಾರ್ಬನ್ ವುಳ್ಳ ಖನಿಜತೈಲ ಯಾವುದು?
ಪೆಟ್ರೋಲಿಯಂ
 
11. ಭಾರತದಲ್ಲಿ ಪೆಟ್ರೋಲಿಯಂ ನಿಕ್ಷೇಪವನ್ನು ಮೊಟ್ಟಮೊದಲಿಗೆ ಎಲ್ಲಿ ಕಂಡುಹಿಡಿಯಲಾಯಿತು.?
‘ಮಾಕುಂ’
12. ಭಾರತದಲ್ಲಿ ಮೊಟ್ಟಮೊದಲಿಗೆ ಜಲವಿದ್ಯುಚ್ಛಕ್ತಿ ತಯಾರಿಕಾ ಕೇಂದ್ರವನ್ನು ಎಲ್ಲಿ ತಯಾರಿಸಲಾಯಿತು?
ಡಾರ್ಜಲಿಂಗ್
13. ಕರ್ನಾಟಕದ ಪ್ರಮುಖ ಜಲವಿದ್ಯುಚ್ಛಕ್ತಿ ತಯಾರಿಕಾ ಕೇಂದ್ರಗಳನ್ನು ಹೆಸರಿಸಿ
ಶಿವನಸಮುದ್ರ, ಶರಾವತಿ, ಲಿಂಗನಮಕ್ಕಿ, ಆಲಮಟ್ಟಿ, ಕಾಳಿ ಮತ್ತು ಭದ್ರ
14. ಪರಮಾಣುಶಕ್ತಿ ಎಂದರೇನು?
ಪರಮಾಣೂಕ ಖನಿಜಗಳಿಂದ ತಯಾರಿಸುವ ವಿದ್ಯುಚ್ಛಕ್ತಿಯನ್ನು ಪರಮಾಣುಶಕ್ತಿ ಎನ್ನುವರು.
15. ಜಲ ವಿದ್ಯುಚ್ಛಕ್ತಿ ಎಂದರೇನು?
ಧುಮುಕುವ ನೀರಿನ ರಭಸದಿಂದ ಉತ್ಪಾದಿಸುವ ವಿದ್ಯುತ್ನ್ನು ಜಲ ವಿದ್ಯುಚ್ಛಕ್ತಿ ಎಂದು ಕರೆಯಲಾಗಿದೆ
III. ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿ

1. ಖನಿಜಗಳ ಪ್ರಾಮುಖ್ಯತೆಯನ್ನು ತಿಳಿಸಿ

ಕೈಗಾರಿಕೆ,
ನಿರ್ಮಾಣಕಾರ್ಯ
ಸಾರಿಗೆ ಮತ್ತು ಸಂಪರ್ಕಗಳ ಪ್ರಗತಿ,
ವ್ಯಾಪಾರ ಮತ್ತು ವಾಣಿಜ್ಯೋದ್ಯಮಗಳ ಪ್ರಗತಿಗೆ ಹೆಚ್ಚು ಉಪಯುಕ್ತ.
ಕೆಲವು ಖನಿಜಗಳಂತೂ ಆರ್ಥಿಕ ಮೌಲ್ಯಗಳನ್ನುಳ್ಳವುಗಳು,
2. ಮ್ಯಾಂಗನೀಸ್ ಅದಿರಿನ ಮಹತ್ವವನ್ನು ವಿವರಿಸಿ
ಇದು ಅತ್ಯಂತ ಪ್ರಮುಖವಾದ ಮಿಶ್ರಲೋಹ ಖನಿಜ. ಇದನ್ನು ಹೆಚ್ಚಾಗಿ ಉಕ್ಕು ತಯಾರಿಸಲು ಉಪಯೋಗಿಸಲಾಗುವುದು.
ಅಲ್ಲದೆ ಬ್ಯಾಟರಿ, ಬಣ್ಣ, ಗಾಜು, ಪಿಂಗಾಣಿ ವಸ್ತು ಮತ್ತು ಕ್ಯಾಲಿ ಪ್ರಿಂಟಿಂಗ್ ಗಾಗಿಯೂ ಬಳಸಲಾಗುವುದು
3. ಅಭ್ರಕದ ಉಪಯೋಗಗಳೇನು?
ಅವು ಪಾರದರ್ಶಕವೂ ಮತ್ತು ಶಾಖ ನಿರೋಧಕ ಗುಣವುಳ್ಳವು,
ಅವುಗಳನ್ನು ಹೆಚ್ಚಾಗಿ ವಿದ್ಯುದುಪಕರಣ ಉದ್ಯಮ, ಟೆಲಿಫೋನ್, ವಿಮಾನ ತಯಾರಿಕೆ, ಸಚಾಲನಾ ವಾಹನ ಕೈಗಾರಿಕೆ ಮತ್ತು ನಿಸ್ತಂತು ಸಂಪರ್ಕ ಮಾಧ್ಯಮಗಳಲ್ಲಿ ಬಳಕೆ ಮಾಡಲಾಗುತ್ತದೆ.
4. ಪೆಟ್ರೋಲಿಯಂ ಮಹತ್ವವನ್ನು ತಿಳಿಸಿ
•    ಪೆಟ್ರೋಲಿಯಂ ಪ್ರಮುಖವಾಗಿ ಹೈಡೋಕಾರ್ಬನ್ನುಳ್ಳ ಖನಿಜತೈಲ
•    ಇದೊಂದು ಅತಿ ಪ್ರಮುಖ ಇಂಧನ ಹಾಗೂ ಹಲವು ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು ಪೂರೈಸುವ ಮೂಲವೂ ಆಗಿದೆ.
•    ವಾಣಿಜ್ಯ ದೃಷ್ಟಿಯಲ್ಲಿ ಮುಖ್ಯ ಶಕ್ತಿಯ ಮೂಲ ಮತ್ತು ಇದನ್ನು ಹೆಚ್ಚಾಗಿ ಸಾರಿಗೆಯಲ್ಲಿ ಬಳಸಲಾಗುತ್ತದೆ.
•    ಕೃತಕ ರಬ್ಬರ್, ಕೃತಕ ರೇಷ್ಮೆ, ಔಷಧಿ, ರಾಸಾಯನಿಕ ಗೊಬ್ಬರ, ಬಣ್ಣ ತಯಾರಿಕೆ ಮೊದಲಾದ
•    ಕೈಗಾರಿಕೆಗಳಿಗೆ ಬೇಕಾದ ಕಚ್ಚಾಪದಾರ್ಥಗಳನ್ನು ಪೂರೈಸುವುದು.
5. ಭಾರತದ ಪರಮಾಣು ವಿದ್ಯುತ್ ಕೇಂದ್ರಗಳನ್ನು ಹೆಸರಿಸಿ
ರಾಣಪ್ರತಾಪಸಾಗರ
ನರೋರ
ಕುಂದನ್ ಕುಲಂ
6. ಅಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ ಅವಶ್ಯಕತೆ ಏನು?
•    ಭಾರತದಲ್ಲಿ ಅಪರಿಮಿತವಾದ ಅಸಂಪ್ರದಾಯಿಕ ಶಕ್ತಿ ಮೂಲಗಳು ದೊರೆಯುತ್ತವೆ.
•    ಅವು ನವೀಕರಿಸಬಲ್ಲ ಮೂಲಗಳು, ಮಾಲಿನ್ಯ ಮುಕ್ತವಾದವು ಮತ್ತು ಪರಿಸರ ಸ್ನೇಹಿಗಳಾಗಿವೆ.
•    ಅವುಗಳನ್ನು ಸುಲಭವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸರಬರಾಜು ಮಾಡಬಹುದು.
•    ಅವುಗಳ ಉತ್ಪಾದನೆಯಿಂದ ದೇಶದ ವಿದ್ಯುತ್ ಅಭಾವವನ್ನು ನೀಗಿಸಬಹುದು,
•    ಭಾರತದಲ್ಲಿ ಇತ್ತೀಚೆಗೆ ವಿದ್ಯುಚ್ಛಕ್ತಿ ಬಳಕೆಯ ದರವು ಹೆಚ್ಚಾಗಿದೆ.
•    ಹೀಗಾಗಿ ತುರ್ತಾಗಿ ಪರ್ಯಾಯ ಶಕ್ತಿ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವುದು ಅವಶ್ಯಕತೆ ಇದೆ
7. ಭಾರತದ ವಿದ್ಯುತ್ ಅಭಾವಕ್ಕೆ ಪ್ರಮುಖ ಕಾರಣಗಳು ಯಾವುವು?
•    ದೇಶದಲ್ಲಿ ಕಡಿಮೆ ಪೆಟ್ರೋಲಿಯಂ ನಿಕ್ಷೇಪದ ಲಭ್ಯತೆ ಮತ್ತು ತೈಲದ ಕೊರತೆ,
•    ಕಡಿಮೆ ದರ್ಜೆಯ ಕಲ್ಲಿದ್ದಲು.
•    ಆಕಾಲಿಕ ಮಳೆ ಮತ್ತು ಜಲ ವಿದ್ಯುಚ್ಛಕ್ತಿ ಉತ್ಪಾದನೆಗೆ ನೀರಿನ ಕೊರತೆ.
•    ಪ್ರಸರಣ ಪ್ರಕ್ರಿಯೆಯಲ್ಲಾಗುವ ವಿದ್ಯುತ್ನ ನಷ್ಟ ಮತ್ತು
•    ಅಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ ಕಡಿಮೆ ಬಳಕೆ,
8. ವಿದ್ಯುಚ್ಛಕ್ತಿ ಅಭಾವಕ್ಕೆ ಪರಿಹಾರಗಳು ಯಾವುವು?
•    ದೇಶದಲ್ಲಿ ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳ ಉತ್ಪಾದನೆಯನ್ನು ಹೆಚ್ಚಿಸುವುದು,
•    ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳಿಗೆ ಬದಲಾಗಿ ಇತರೆ ಪರ್ಯಾಯ ಶಕ್ತಿ ಸಂಪನ್ಮೂಲಗಳನ್ನು ಬಳಸಲು ಕ್ರಮಕೈಗೊಳ್ಳುವುದು.
•    ಹೆಚ್ಚೆಚ್ಚು ಜಲ ವಿದ್ಯುಚ್ಛಕ್ತಿ ಉತ್ಪಾದನೆಗೆ ಪ್ರಾಮುಖ್ಯತೆ ನೀಡುವುದು,
•    ಆಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳನ್ನು ಹೆಚ್ಚಾಗಿ ಬಳಕೆ ಮಾಡುವುದು

Related Articles

Leave a Reply

Your email address will not be published. Required fields are marked *

Back to top button