Class 10 Social Textbook Solutions

ಭಾರತದ ಋತುಗಳು – ೧೦ ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ಅಧ್ಯಾಯ-11 ಭಾರತದ ಋತುಗಳು

I. ಬಿಟ್ಟ ಸ್ಥಳಗಳನ್ನು ಸೂಕ್ತವಾದ ಪದಗಳಿಂದ ಭರ್ತಿ ಮಾಡಿರಿ.

1. ದೇಶದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿದ ಸ್ಥಳ ಗಂಗಾನಗರ ಆಗಿದೆ.

2. ಅತಿ ಹೆಚ್ಚು ಮಳೆ ಬೀಳುವ ಋತುಮಾನ ನೈಋತ್ಯ ಮಾನ್ಸೂನ್‌ ಮಳೆಗಾಲ ಆಗಿದೆ.

3. ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ರೊಯ್ಲಿ

4. ಭಾರತದಲ್ಲಿಯೇ ಅತಿ ಹೆಚ್ಚು ಮಳೆಯಾಗುವ ಸ್ಥಳ ಮಾಸಿನ್‌ ರಾಮ್‌

5. ಭಾರತದ ವ್ಯವಸಾಯವನ್ನು ಮಾನ್ಸೂನ್ ಮಳೆಯ ಜೊತೆಯಲ್ಲಿ ಆಡುವ ಜೂಟಾಟ ಎಂದು ಕರೆಯುತ್ತಾರೆ.‌

II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಗಳನ್ನು ಬರೆಯಿರಿ.

1. ಭಾರತವು ಯಾವ ಬಗೆಯ ವಾಯುಗುಣವನ್ನು ಹೊಂದಿದೆ?
ಉಷ್ಣವಲಯದ ಮಾನ್ಸೂನ್‌ ಮಾದರಿಯ ವಾಯುಗುಣ

2. ಮಾನ್ಸೂನ್‌ ಮಾರುತ ಎಂದರೇನು?
ನೈಋತ್ಯ ದಿಕ್ಕಿನಿಂದ ಈಶಾನ್ಯದ ಕಡೆಗೆ ಬೀಸುವ ಮಾರುತಗಳನ್ನು ಮಾನ್ಸೂನ್‌ ಮಾರುತಗಳು ಎನ್ನುವರು.

3. ಯಾವ ಋತುವನ್ನು ಸಾಮಾನ್ಯವಾಗಿ ಮಳೆಗಾಲವೆಂದು ಕರೆಯುವರು?
ನೈಋತ್ಯ ಮಾನ್ಸೂನ್‌ ಕಾಲ

4. ಭಾರತದ ವಾಯುಗುನದ ಮೇಲೆ ಪ್ರಭಾವ ಬೀರುವ ಅಂಶಗಳಾವುವು?

ಅಕ್ಷಾಂಶ ಸಮುದ್ರಮಟ್ಟದಿಂದ ಇರುವ ಎತ್ತರ ಸಾಗರಗಳಿಂದ ಇರುವ ದೂರ ಮಾರುತಗಳ ದಿಕ್ಕುಪರ್ವತ ಸರಣಿಗಳು ಹಬ್ಬಿರುವ ರೀತಿ ಸಾಗರ ಪ್ರವಾಹಗಳು

5. ಭಾರತದ ವ್ಯವಸಾಯವು “ಮಾನ್ಸೂನ್‌ ಮಾರುತಗಳೊಡನೆ ಆಡುವ ಜೂಜಾಟವಾಗಿದೆ” ಚರ್ಚಿಸಿರಿ.

ಭಾರತದ ಜನತೆಯ ಪ್ರಧಾನ ಉದ್ಯೋಗವು ವ್ಯವಸಾಯವಾಗಿರುವುದರಿಂದ ನೈಋತ್ಯ ಮಾನ್ಸೂನ್‌ ಮಾರುತಗಳು ಒಂದು ವಿಧದಲ್ಲಿ ದೇಶದ ವ್ಯವಸಾಯವನ್ನು ನಿಯಂತ್ರಿಸುತ್ತದೆ.
ಈ ಮಳೆ ವಿಫಲವಾದರೆ ಬರಗಾಲ ಬರುವುದು.
 ಅತಿ ಹೆಚ್ಚಾದಾಗ ಪ್ರವಾಹ ಉಂಟಾಗಿ ಪ್ರಾಣ ಹಾನಿ ಮತ್ತು ಆಸ್ತಿಗಳಿಗೆ ಹಾನಿ ಉಂಟಾಗುತ್ತದೆ.
 ಆದ್ದರಿಂದಲೇ ಭಾರತದ ವ್ಯವಸಾಯವನ್ನು ಮಾನ್ಸೂನ್‌ ಜೊತೆಯಲ್ಲಿ ಆಡುವ ಜೂಜಾಟ ಎಂದು ಕರೆಯುತ್ತಾರೆ.

Related Articles

Leave a Reply

Your email address will not be published. Required fields are marked *

Back to top button