Class 9th Second Language Kannada Textbook Solutions

ಬೊಮ್ಮನಹಳ್ಳಿ ಕಿಂದರಿಜೋಗಿ- Class 9th Second Language Kannada Textbook Solutions

 ಪದ್ಯ ೧೩
ಬೊಮ್ಮನಹಳ್ಳಿ ಕಿಂದರಿಜೋಗಿ 

ಕವಿ/ಲೇಖಕರ  ಪರಿಚಯ

* ಕುವೆಂಪು ರವರು 1904 /ಡಿಸೆಂಬರ್ 29 ರಲ್ಲಿ  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ ಜನಿಸಿದರು.
* ಇವರು ಶ್ರೀ ರಾಮಾಯಣ ದರ್ಶನಂ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಇನ್ನೂ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
* ಶ್ರೀಯುತರಿಗೆ ಜ್ಞಾನಪೀಠ ಪ್ರಶಸ್ತಿ,  ಕರ್ನಾಟಕ ರತ್ನ, ಪಂಪ ಪ್ರಶಸ್ತಿ, ಪದ್ಮಭೂಷಣ, ಪದ್ಮವಿಭೂಷಣ ಇನ್ನೂ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ಮರಣ:- 11/ ನವೆಂಬರ್ 1994
ಆಕರ ಕೃತಿ :- ಬೊಮ್ಮನಹಳ್ಳಿ ಕಿಂದರಿಜೋಗಿ ಮಕ್ಕಳ ಪುಸ್ತಕ
(ಸಾರಾoಶ )
ಬೊಮ್ಮನಹಳ್ಳಿಯಲ್ಲಿ ಎಲ್ಲೆಲ್ಲೂ ಇಲಿಗಳು, ಈ ಇಲಿಗಳಿಂದ ಊರಿನ ಜನರಿಗೆಲ್ಲ ANY, ಕೇಂದರೆಯಾಯಿತು, ಇಲಿಗಳ ಕಾಟದಿಂದ ಊರಿಗೆ ಮುಕ್ತಿಕೊಡಲು ಕಂದರಿಜೋಗಿಯು ತನ್ನ ಕಿಂದರಿಯೊಂದಿಗೆ ಬಂದರು.ಏನೆಂದೂ ಮಾತನಾಡದೆ ಬಂದ ಕಿಂದರಿಜೋಗಿಯು ಊರ ಕಟ್ಟೆಯನ್ನಿಳಿದು ಬೀದಿಗೆ ಬಂದನು ಕಿಂದರಿ ಜೋಗಿಯು ತನ್ನ ಉದ್ದನೆಯ ಗಡ್ಡವನ್ನು ನೀವುತ್ತಾ, ಬಾಯಲ್ಲಿ, ಮುದುಕ: ಮಂತ್ರವನ್ನು ಹಾಡಿ, ತನ್ನ ವಾದ್ಯವಾದ ಕಿಂದರಿಯನ್ನು ದಾರಿಸತೊಡಗಿದರು, ಆ ನಾದವು ಇಡಿಯ ಜಗತ್ತನ್ನೇ ಮೋಹದಲ್ಲಿ ಮುಳುಗಿಸಿತು. ಕಿಂದರಿಯ ಸುದವನ್ನು ಕೇಳುತ್ತಿದ್ದವರೆಲ್ಲರಿಗೂ ಗಜಿಬಿಜಿ ಗದ್ದಲ ಕೇಳತೊಡಗಿತು. ಆ ಕಡೆ, ಈ ಕಡೆ, ಎಲ್ಲಾ ಕಡೆ ಇಲಿಗಳು ಹಿಂಡು ಹಿಂಡಾಗಿ ಬರತೊಡಗಿದವು, ಇಲಿಗಳು ಬಳಬಳನೆಂದು ಬಂದವು, ಇಲಿಗಳ ದಂಡೇ ಎಂದರೆ ದೊಡ್ಡಸನವೇ ಬರತೊಡಗಿತು.ಇಲಿಗಳು ಅನ್ನದ ಮಡಿಕೆಯನ್ನು ಬಿಟ್ಟು ಟೋಪಿಯ ಗೂಡನ್ನು ತ್ಯಜಿಸಿ, ಅಂಗಿಯ ಜೇಬನ್ನು ಬಿಟ್ಟು ಮಕ್ಕಳ ಕಾಲಿನ ಚೀಲವನ್ನು ಬಿಟ್ಟು ಹಾರುತ್ತಾ ಓಡುತ್ತಾ, ನೆಗೆಯುತ್ತಾ, ಬರೆಯುತ್ತಾ ಬಂದವು, ಜೋಗಿಯು ನುಡಿಸಿದ ಕಿಂದರಿಯ ಧ್ವನಿಯಿಂದ ಎಲೆ ಇಲಿಗಳು ತಮ್ಮ ತಮ್ಮ ಸ್ಥಳವನ್ನು ಬಿಟ್ಟು ಬಂದವು. ಸಗ್ಗ ಇಲಿ, ದೊಡ್ಡ ಇಲಿ, ಮೂಗಿಲಿ, ಸುಡಿಲಿ, ಆಗೇಲಿ, ತಮಿಲಿ, ಅವ್ವ ಇಲಿ, ಅಪ್ಪ ಇಲಿ, ಮಾವ, ಭಾವ, ಅಕ್ಕ, ತಂಗಿ, ಗಂಡು, ಹೆಣ್ಣು, ಮುದುಕ, ಹುಡುಗ ಎಲ್ಲಾ ಇಲಿಗಳು ಓಡೋಡಿ, ಕಿಂದರಿಯ ನಾದದಿಂದ ಮೋಹಗೊಂಡು ಬಂದವು.ನಾನು ಬಣ್ಣದ ಇಲಿಗಳು, ಕೆಂಪು, ಹಳದಿ, ಬಿಳಿ, ಕಪ್ಪು ಇಲಿಗಳು, ಗಿಂಗಳಲ್ಲಿರುವ, ಹೊಲಗಳಲ್ಲಿರುವ ಕುಂಕುಮ ಬಣ್ಣದ, ಚಂದನ ಭಾಗದ ಹಸುರಿನ ಬಣ್ಣದ, ಪಚ್ಚೆಯ ವರ್ಣದ, ಸಂಜೆಯ ರಾಗದ, ಗಗನದ ರಾಗದ, ಹೀಗೆ ಅನೇಕ ಬಣ್ಣದ ಇಲಿಗಳು ಒಳದವು, ಕಿಂದರಿಯನ್ನು ಜೋಗಿ ಬಾರಿಸುತ್ತಿದ್ದಾಗ ಆ ದಾಗಿ ಮೋಹಗೊಂಡ *ನಾ ಇಲಿಗಳು ಕುಣಿಯುತ್ತ, ನಲಿಯುತ್ತಾ, ಸಂತೋಷದಿಂದ ಒಂದು ಸೇರಿದವು… ಹೋಗಿ ನೋಡಿರಿ! ನೋಡಿರಿ ಎಲ್ಲೇಲ್ಲೂ ಇಲಿಗಳ ಸಮೂಹವೇ ಇನೆ, ಇನ್ನೂ ಬರುತ್ತಲೇ ಇವೆ ಆಟದ ಮೇಲಿಂದ ಕೆಲವು ಇನ್ನೂ ಕೆಲವು ಕಳದ ಕಡೆಯಿಂದ ಹಿಂಡು ಹಿಂಡಾಗಿ ಬರುತ್ತಿವೆ. ಕುಂಟು ಇಲಿಗಳು, ಕಿವುದು ಇಲಿಗಳು, ಹೆಳವಿಲಿಗಳು ಮೂಗಿಲಿಗಳು, ಚೀ, ಪಿ ಎನ್ನುತ ಕೂಗುತ ಓಡೋಡಿ ಬರುತ್ತಿವೆ. ಅವುಗಳು ಗಹಗಹಿಸುತ, ನಲಿನಲಿದಾಡುತ್ತಾ ಇರೀ ಮೂಷಿಕ ಸಂಕುಲವೇ ಕಿಂದರಿಯ ಧ್ವನಿಗೆ ಮನಸೋತು ಜೋಗಿಯನ್ನು ಹಿಂಬಾಲಿಸಿ ಬರುತ್ತಿವೆ. ಬೊಮ್ಮನಹಳ್ಳಿಯ ಕಿಂದರಿಜೋಗಿಯು ತನ್ನ ಕಿಂದರಿಯನ್ನು ನುಡಿಸುತ್ತಾ ಮುಂದೆ ಮುಂದೆ ಸಾಗುತ್ತಾ ತುಂಗಾನದಿಯ ಕಡೆಗೆ ಹೊರಟನು. ಅವನ ಕಂದರಿಯ ನಾದಕ್ಕೆ ಮೋಹಗೊಂಡ ಇಲಿಗಳೆಲ್ಲಾ ಅವನನ್ನೇ ಅನುಸರಿಸಿದವು, ಈ ಅದ್ಭುತವಾದ, ಕೌತುಕದ ದೃಶ್ಯವನ್ನು ನೋಡಲು ಜನರೂ ಸೇರಿದರು. ಜೋಗಿಯು ಮುಂದೆ ಮುಂದೆ ಸಾಗುತ್ತಿದ್ದಾಗ ಗಳು ಅವನನ್ನೇ ಅನುಸರಿಸುತ್ತಾ ಹಿಂದೆ ಹಿಂದೆ ಹೋದವು, ಎಲ್ಲರೂ ನದಿಯ ದಡದಲ್ಲಿ ಸೇರಿದರು. ಹೋಳೆಯ ಮರಳ ದಂಡೆಯಲ್ಲಿ ಮೂಷಿಕಗಳ ಗುಂಪೇ ನೆರೆದಿತ್ತು, ಎಲ್ಲಿ ನೋಡಿದರೂ ಇಲಿಗಳೇ ಜನರೆಲ್ಲ ಮುಂದೇನಾಗುವುದೋ ಎಂಬ ಕಾತುರತೆಯಿಂದ ಉಸಿರು ಹಿಡಿದು ನಿಂತಿದ್ದರು. ಆಕಾಶದಲ್ಲಿ ದೇವತೆಗಳು ಒಂದುಗೂಡಿದರು, ಸಂತೋಷದಿಂದ ಹೋಮಳೆಯನ್ನು ಸುರಿಸಿದರು ಮತ್ತು ಹಿಂದೆಂದೂ ನೋಡಿರದ ಆ ಅದ್ಭುತ ದೃಶ್ಯವ ಸಂತೋಷಕ್ಕಾಗಿ ದುಂದುಭಿ (ಕಹಳೆ)ಯ ನಾದವನ್ನು ಮಾಡಿದರು.ಕಿಂದರಿ ಜೋಗಿಯು ಒಮ್ಮೆ ಸುತ್ತಲೂ ನೋಡಿ, ಹೊಳೆಯ ನೀರಿನೊಳಗೆ ನಡೆದನು, ಸೇರಿದ್ದ ಜನರೆಲ್ಲರೂ ಆಶ್ಚರ್ಯ ಚಕಿತರಾಗಿ * ಜಮ ಜನ ಹೋಗಿ ಎಂದು ಜೋರಾಗಿಕೂಗಿದರು. ಜೋಗಿಯ ಹಿಂದೆಯೆ ಒಂದರ ಮೇಲೊಂದು ಇಲಿಗಳು ಅವನ್ನೇ ಹಿಂಬಾಲಿಸಿದವು, ಎಲ್ಲಾ ಇಲಿಗಳು ನೀರಿನೊಳಗೆ ಮುಳುಗಿ ಹೋದವು, ಸ್ವಲ್ಪ ಹೊತ್ತಿನಲ್ಲಿಯೇ ಅವೆಲ್ಲವೂ ಸತ್ತು ಹೆಣವಾಗಿ ನೀರಿನ ಮೇಲೆ ತೆಲಿದವು.  ಹೀಗೆ ಕಿಂದರಿಜೋಗಿಯು ಬೊಮ್ಮನಹಳ್ಳಿಯ ಜನರನ್ನು ಇಲಿಗಳ ಕಾಟದಿಂದ ಮುಕ್ತಿಗೊಳಿಸಿದನು. ಈ ಪದ್ಯವನ್ನು ನಮ್ಮ ರಾಷ್ಟ್ರಕವಿ ಕುವೆಂಪುರವರು ರಚಿಸಿದ್ದಾರೆ.

     ಪದಗಳ ಅರ್ಥ

 
ಕಿಂದರಿ – ಒಂದು ಬಗೆಯ ವಾದ್ಯ  
ಗಜಿಬಿಜಿ – ಗೌಜಿ, ಗದ್ದಲ   
ಚಂಡನಾರಾಗ– ಚಂದನದ ಬಣ್ಣ (ಗಾಢ ಕೆಂಪು) 
ಅಟ್ಟ – ಉಪ್ಪರಿಗೆ, ಮಾಳಿಗೆ.  
ಮೂಷಿಕ – ಇಲಿ, ಇಲಿಯ ಜಾತಿಗೆ ಸೇರಿದ ಪ್ರಾಣಿ  
ದಿವಿಜ – ದೇವತೆ, ಸ್ವರ್ಗದಲ್ಲಿ ಹುಟ್ಟಿದ  
ಜೋಗಿ – ಗೋಸಾವಿ, ಅಲೆಯುವ ಬೈರಾಗಿ  
ಕುಂಕುಮರಾಗ – ಕೆಂಪುಬಣ್ಣ  
ಪಚ್ಚೆ- ಹಸಿರು ಬಣ್ಣ, ಹಸಿರುಬಣ್ಣದ ಶಿಲೆ  
ದುಂದುಭಿ- ಕಹಳೆ  
ಬೆರಗು – ಅಚ್ಚರಿ  
ಕಣಜ – ಭತ್ತ, ಧಾನ್ಯಗಳನ್ನು ಸಂಗ್ರಹಿಸಿಡುವ ಸ್ಥಳ, ಬಳ್ಳ .
          ಪ್ರಶ್ನೆಗಳು

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. 

1. ಜಗವನ್ನು ಮೋಹಿಸಿದ ನಾದ ಯಾವುದು?

ಉತ್ತರ:- ಜೋಗಿಯ ಕಿಂದರಿಯ ನಾದವು ಜಗವನ್ನೇ ಮೊಹದಲ್ಲಿ ಮುಳುಗಿಸಿತು. 
2.ಇಲಿಗಳು ಎಲ್ಲೆಲ್ಲಿಂದ ಬಂದವು?
ಉತ್ತರ:- ಬೋಮ್ಮನ ಹಳ್ಳಿಯ ಎಲ್ಲಾ ಕಡೆಗಳಿಂದಲೂ ಇಲಿಗಳು ಬಂದವು.
3.ಕಿಂದರಿಜೋಗಿಯು ಯಾವ ನದಿಯ ಕಡೆಗೆ ಹೊರಟನು?
ಉತ್ತರ:- ಕಿಂದರಿ ಜೋಗಿಯು ತುಂಗಾನದಿಯ ಕಡೆಗೆ ಹೊರಟನು.
4.ಜನರು ಏನೆಂದು ಕೂಗಿದರು?
ಉತ್ತರ:- ಜನರು “ಜಯ ಜಯ ಜೋಗೀ” ಎಂದು ಕೂಗಿದರು. 
5. ನೀರಿಗಿಳಿದ ಇಲಿಗಳು ಏನದವು?
ಉತ್ತರ:- ನೀರಿಗಿಳಿದ ಎಲ್ಲಾ ಇಲಿಗಳು ನೀರೊಳು ಮುಳುಗಿ ಸತ್ತು ಹೋದವು.
 
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ : 

1.ಜೋಗಿಯು ಕಿಂದರಿ ಬಾರಿಸಿದಾಗ ಇಲಿಗಳು ಬಂದ ಬಗೆ ವರ್ಣಿಸಿ,

ಉತ್ತರ:- ಜೋಗಿಯು ಕಿಂದರಿಯನ್ನು ಬಾರಿಸಿದಾಗ ಇಲಿಗಳು ಅನ್ನದ ಮಡಕೆಯನ್ನು ಬಿಟ್ಟು, ಟೋಪಿಯ ಗೂಡನ್ನು ತ್ಯಜಿಸಿ, ಅಂಗಿಯ ಜೇಬನ್ನು ಬಿಟ್ಟು, ಮಕ್ಕಳ ಕಾಲಿನ ಚೀಲವನ್ನು ತೊರೆದು, ಹಾರುತ್ತಾ ಓಡುತ್ತಾ, ನೆಗೆಯುತ್ತಾ, ಕುಣಿಯುತ್ತಾ ಹಿಂಡು ಹಿಂಡಾಗಿ ಎಲ್ಲಾ ಕಡೆಗಳಿಂದಲೂ ಬಂದವು.
2.ಯಾವ ಯಾವ ಇಲಿಗಳು ಕಿಂದರಿಯ ಧ್ವನಿ ಕೇಳಿ ಬಂದವು?
ಉತ್ತರ:- ಜೋಗಿಯ ಕಿಂದರಿಯ ಧ್ವನಿಯನ್ನು ಕೇಳಿ ಎಲ್ಲಾ ರೀತಿಯ ಇಲಿಗಳು ಬಂದವು ಅವುಗಳಲ್ಲಿ ಸಣ್ಣ ಇಲಿ, ದೊಡ್ಡ ಇಲಿ, ಮೂಗಿಲಿ, ಸುಡಿಲಿ, ಆಣೇಲಿ, ತಮಿಲಿ, ಅವ್ವ ಇಲಿ, ಅಪ್ಪ ಇಲಿ, ಮಾವ ಇಲಿ, ಪಾವ ಇಲಿ, ಅಕ್ಕ ಇಲಿ, ತಂಗಿ ಇಲಿ, ಗಂಡು ಇಲಿ, ಹೆಣ್ಣು ಇಲಿ, ಮುದುಕಿ ಇಲಿ, ಹುಡುಗಿರಲಿ ಈ ರೀತಿ ಬಂದವು. 
3.ಯಾವ ಬಣ್ಣಗಳ ಇಲಿಗಳು ಕಿಂದರಿಜೋಗಿಯತ್ತ ಧಾವಿಸಿದವು?
ಉತ್ತರ:- ನಾನಾ ಬಣ್ಣದ ಇಲಿಗಳು ಅಂದರೆ ಕೆಂಪು, ಹಳದಿ ಬಿಳಿ ಕರಿಲಿ, ಕುಂಕುಮ ರಾಗದ ಇಲಿಗಳು ಚಂದನರಾಗದ, ಹಸಿರುಬಣ್ಣದ, ಪಚ್ಚೆಯ ವರ್ಣದ, ಸಂಜೆಯ ರಾಗದ, ಗಗನದ ರಾಗದ ಹೀಗೆ ನಾನಾವರ್ಣಗಳ ಇಲಿಗಳು ಕುಣಿಯುತ್ತಾ, ನಲಿಯುತ್ತಾ, ಸಂತೋಷದಿಂದ ಕಿಂದರಿ ಜೋಗಿಯುತ್ತ ಧಾವಿಸಿದವು,
4. ಹೊಳೆಯ ಬದಿ ಯಾರೆಲ್ಲ ಸೇರಿದರು?
ಉತ್ತರ:- ಹೊಳೆಯ ಬದಿಯಲ್ಲಿ ಜೋಗಿ, ಎಲ್ಲಾ ಇಲಿಗಳು ಹಾಗೂ ಊರಿನ ಜನರೆಲ್ಲ ಸೇರಿದ್ದರು. ಇಡೀ ಮೂಷಿಕ ಗುಂಪೇ ಅಲ್ಲಿ ನೆರೆದಿತ್ತು, ಗಗನದಲ್ಲಿ ದೇವತೆಗಳು ಒಟ್ಟು ಗೂಡಿದ್ದರು. ಆಗ ಮುಂದೇನಾಗುವುದೋ ನೋಡಬೇಕೆಂಬ ಕುತೂಹಲದಿಂದ ಜನರೆಲ್ಲರೂ ಹೊಳೆಯ ಬದಿಯಲ್ಲಿ ಸೇರಿದರು.
5.ಕಿಂದರಿಜೋಗಿ ಇಲಿಗಳನ್ನು ಪರಿಹರಿಸಿದ ಬಗೆ ಹೇಗೆ?
ಉತ್ತರ:- ಕಿಂದರಿ ಜೋಗಿಯು ಇಷ್ಟೊಂದು ಅಪಾರವಾದ ಇಲಿಗಳನ್ನು ಪರಿಹರಿಸಬೇಕಿತ್ತು. ಅದಕ್ಕಾಗಿ ಅವನು ಮೋಹಭರಿತ ರಾಗವನ್ನು ತನ್ನ ಕಿಂದರಿಯಿಂದ ನುಡಿಸುತ್ತಾ ಹೊಳೆಯ ನೀರಿನೊಳಗೆ ನಡೆದು ಹೋದನು. ಇಡೀ ಮೂಷಿಕ ಗಂಪ ಅವನನ್ನು ಹಿಂಬಾಲಿಸುತ್ತಾ ಹೋಗಿ ನೀರೋಳು ಬುಳುಬುಳು ಮುಳುಗಿದವು. ನಂತರ ಅವೆಲ್ಲ ಸತ್ತು, ಅದೇ ನೀರಿನಲ್ಲಿ ಹೆಣವಾಗಿ ತೇಲಿದವು. ಹೀಗೆ ಜೋಗಿಯು ಇಲಿಗಳನ್ನು ಪರಿಹರಿಸಿದನು.

 ಇ) ಕೊಟ್ಟಿರುವ ಪ್ರಶ್ನೆಗೆ ಎಂಟು-ಹತ್ತು ಪಾಕ್ಯಗಳಲ್ಲಿ ಉತ್ತರಿಸಿ

1)ಕಿಂದರಿ ಜೋಗಿಯು ಕಿಂದರಿಯನ್ನು ಬಾರಿಸಿದಾಗ ಇಲಿಗಳ ಸಮೂಹ ಹೇಗೆ ಜಮಾಯಿಸಿತು ?

ಉತ್ತರ:- ಕಿಂದರಿ ಜೋಗಿಯು ಕಿಂದರಿಯಲ್ಲಿ ಮೋಹಭಣ ರಾಗವನ್ನು ನುಡಿಸಿದಾಗ ಇಡೀ ಜಗವೇ ಆ ಮೋಹದಲ್ಲಿ ಮುಳುಗಿ ಹೋಯಿತು. ಬೊಮ್ಮನ ಹಳ್ಳಿಯ ಮೂಲೆ ಮೂಲೆಯಲ್ಲಿದ್ದ ಎಲ್ಲ ಇಲಿಗಳು ತಾವಿದ್ದ ಸ್ಥಳದಿಂದ ತಮಗೇ ಅರಿವಾಗದಂತೆ ಕಿಂದರಿಯ ಧ್ವನಿಯವನ್ನು ಸರಿಸಿ ಬಂದವು, ಇಲಿಗಳೆಲ್ಲ ಸಮ್ಮೋಹನಾಸ್ತ್ರಕ್ಕೊಳಗಾದಂತೆ ಜೋಗಿಯ ಕಿಂದರಿಯ ನಾದವನ್ನು ಸರಿಸಿ ಬಂದವು. ವಿವಿಧ ಸ್ಥಳಗಳಾದ ಅನ್ನದ ಮಡಕೆಯಿಂದ, ಟೋಪಿಯಗೂಡಿಂದ, ಅ೦ಗಿಯ ಜೇಬು, ಮಕ್ಕಳ ಕಾಲಿನ ಚೀಲದಿಂದ ಹಾರುತ್ತಾ, ನೆಗೆಯುತ್ತಾ, ಕುಣಿಯುತ್ತಾ ಬಂದವು. ಎಲ್ಲಾ ಗಾತ್ರದ ಎಂದರೆ ಸಣ್ಣ, ದೊಡ್ಡ, ಮೂಗಿಲಿ, ಸೊಂಡಿಲಿಗಳ ಜೋತೆ, ಕುಟುಂಬದ ಬಾಂಧವ್ಯವುಳ್ಳ ಅಣ್ಣ, ತಮ್ಮ, ಅವ್ವ, ಅಪ್ಪ, ಮಾವ,ಬಾವ, ಅಕ್ಕ, ತಂಗಿ, ಗಂಡು, ಹೆಣ್ಣು, ಮುದುಕಿ, ಹುಡುಗಿ ಹೀಗೆ ಎಲ್ಲವೂ ಬಂದು ಸೇರಿದವು, ನಾನಾ ಬಣ್ಣದ ಇಲಿಗಳಾದ ಬಿಳಿ ಕರಿ, ಕೆಂಪು, ಹಳದಿ ಕುಂಕುಮ ರಾಗದ ಇ ಚಂದನರಾಗದ, ಹಸಿರು, ಪಚ್ಚೆ, ಸಂಜೆ ರಾಗದ, ಗಗನದ ರಾಗದ ಅನೇಕ ರೀತಿಯ ಮೂಷಿಕಗಳ ಹಿಂಡೇ ಬಂದವು. ಅದೇರೀತಿ ಕುಂಟ, ಕಿವುಡ, ಹೆಳವ, ಮೂಗಿಲಿಗಳ ಸಮೂಹವೇ ಅಲ್ಲಿ ಬಂದು ಸೇರಿದವು. ಒಟ್ಟಿನಲ್ಲಿ ಹೇಳುವುದಾದರೆ ಬೋಮ್ಮನಹಳ್ಳಿಯಲ್ಲಿ ಒಂದೂ ಇತಿ ಉಳಿಯದಂತೆ ಇಲಿಗಳ ಹಿಂಡೇ ಬಂದು ಜನಯಿಸಿತು.

2. ಹೊಳೆಯ ದಂಡೆಯಲ್ಲಿ ಏನೇxನು ನಡೆಯಿತು?

ಉತ್ತರ:- ಇಡೀ ಊರಿನ ಮೂಲೆ ಮೂಲೆಗಳಿಂದ ಎಲ್ಲಾ ಇಲಿಗಳು ಜೋಗಿಯ ಕಿಂದರಿಯ ನಾದವನ್ನನುಸರಿಸಿ ಹೊಳೆಯ ದಂಡೆಯಲ್ಲಿ ಬಂದು ಸೇರಿದವು, ಹೊಳೆಯ ಮರಳಿನ ಗುಡ್ಡೆಯ ತುಂಬಾ ಎಲ್ಲೆಲ್ಲಿ ನೋಡಿದರೂ ಮೂಷಿಕ ಗುಂಪು, ಉಸಿರಾಡದೆ ಮುಂದೇನಾಗುವುದೋ ಎಂಬ ಕೌತುಕದಿಂದ ಕಾದಿದ್ದ ಬೊಮ್ಮನ ಹಳ್ಳಿಯ ಜನರೂ ಸಹ ಹೊಳೆಯ ದಂಡೆಯಲ್ಲಿ ಜಮಾಯಿಸಿದ್ದರು ಗಗನದಲ್ಲಿ ದೇವತೆಗಳು ಇಂತಹ ಅದ್ಭುತ ದೃಶ್ಯವನ್ನು ನೋಡಿ ಹೂಮಳೆ ಕರೆದರು, ನಂತರ ಜೋಗಿಯು ತನ್ನ ಸುತ್ತ ಮುತ್ತಲೂ ಒಮ್ಮೆ ನೋಡಿ, ಹೊಳೆಯ ನೀರಿನೊಳಗೆ ನಡೆಯುತ್ತಾ ಹೋದನು. ಆಗ ಅಲ್ಲಿ ನೆರೆದಿದ್ದ ಜನರು ಅತ್ಯಾಶ್ಚರ್ಯದಿಂದ “ಜಯ ಜಯ ಜೋಗೀ!” ಎಂಬ ಘೋಷಣೆಯನ್ನು ಕೂಗಿದರು. ಅವನ ಹಿಂದೆ ಬುಳುಬಳುನೆ ಎಲ್ಲಾ ಇಲಿಗಳು ಮಡಿಸಿದಾಗ ಎಂಬದ ಜಗದನ ಮೋಹಿಸಿತಾ ನಾದ!  ನೀರಿನೊಳಗೆ ಒಂದರ ಮೇಲೊದರಂತೆ ಜೋಯ್ಸನು ಹಿಂಬಾಲಿಸಿದವು. ನೀರೊಳಗೆ ಮುಳುಗಿ ಸತ್ತು ಹೆಣವಾದವು.

ಈ)ವಾಕ್ಯಗಳ ಸ್ವಾರಸ್ಯವನ್ನು ಐದಾರು ವಾಕ್ಯಗಳಲ್ಲಿ ವಿಸ್ತರಿಸಿ ಬರೆಯಿರಿ.


1.ಜಗವನೆ ಮೋಹಿಸಿತಾ ನಾದ!
ಆಯ್ಕೆ:-
ಈ ವಾಕ್ಯವನ್ನು ನಮ್ಮ ರಾಷ್ಟ್ರಕವಿ “ಕುವೆಂಪು”ರವರು ಬರೆದಿರುವ “ಬೊಮ್ಮನ ಹಳ್ಳಿಯ ಕಿಂದರಿ ಜೋಗಿ” ಎಂಬ ಮಕ್ಕಳ ಪುಸ್ತಕದಿಂದ ಆಯ್ದ  ಅದೇ ಹೆಸರಿನ “ಕಿಂದರಿ ಜೋಗಿ” ಪದ್ಯದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಬೊಮ್ಮನ ಹಳ್ಳಿಯಲ್ಲಿ,ಜನರು ಇಲಿಗಳ ಕಾಟದಿಂದ ಬೇಸತ್ತು ಹೋದಾಗ ಅಲ್ಲಿನ ಗೌಡರು ಇಲಿಗಳ ಉಪದವವನ್ನು ಯಾರು ಸಂಪೂರ್ಣವಾಗಿ ಪರಿಹರಿಸುತ್ತಾರೋ ಅವರಿಗೆ 6,000 ನಾಣ್ಯಗಳನ್ನು ಕೊಡುವೆ ಎಂದು ಘೋಷಿಸಿದಾಗ ಅಲ್ಲಿಗೆ ಬಂದವ ಕಿಂದರಿಜೋಗಿ – ಇಲಿಗಳಿಂದ ಆ ಊರನ್ನು ಮುಕ್ತಗೊಳಿಸಲು ಅವನು ತನ್ನಲ್ಲಿದ್ದ ಕಿಂದರಿಯನ್ನು ಬಾರಿಸತೊಡಗಿದನು. ಆ ನಾದವು ಇಡೀ ಜಗವನ್ನೇ ಮೋಹಿಸಿತು ಎಂದು ಆ ಸಂದರ್ಭದಲ್ಲಿ ಕವಿಯು ಉದ್ಧರಿಸಿದ ನುಡಿಗಳಿವು.
2. ‘ಓಹೋ! ಬಂದುವು ಹಿಂಡ್ಹಿಂಡಾಗಿ!
ಆಯ್ಕೆ:-
ಈ ವಾಕ್ಯವನ್ನು ನಮ್ಮ ರಾಷ್ಟ್ರಕವಿ “ಕುವೆಂಪು”ರವರು ಬರೆದಿರುವ “ಬೊಮ್ಮನ ಹಳ್ಳಿಯ ಕಿಂದರಿ ಜೋಗಿ” ಎಂಬ ಮಕ್ಕಳ ಪುಸ್ತಕದಿಂದ ಆಯ್ದ  ಅದೇ ಹೆಸರಿನ “ಕಿಂದರಿ ಜೋಗಿ” ಪದ್ಯದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಜೋಗಿಯು ತನ್ನ ಕಿಂದರಿಯನ್ನು ಬಾರಿಸುತ್ತಾ ಊರ ರಸ್ತೆಗಳಲ್ಲೆಲ್ಲಾ ತಿರುಗಾಡಿದನು. ಅದರ ನಾದದಿಂದ ಮೋಹಗೊಂಡ ಇಲಿಗಳೆಲ್ಲ ತಮ್ಮ ತಮ್ಮ ಸ್ಥಳಗಳನ್ನು ಬಿಟ್ಟು ಆ ನಾದವನ್ನೇ ಹಿಂಬಾಲಿಸಿ ಬಂದವು, ಎಲ್ಲಾ ಜಾಗಗಳಲ್ಲಿದ್ದ, ಎಲ್ಲಾ ಬಣ್ಣದ, ಎಲ್ಲಾ ವರ್ಗದ ಇಲಿಗಳು ಓಡೋಡಿ ಬಂದಾಗ ಕಿವಿಯು ಅವುಗಳನ್ನು ನೋಡಿ ಮೇಲಿನ ಸಾಲುಗಳನ್ನು ಉದ್ದರಿಸಿದ್ದಾರೆ. ಎಂದರೆ ಇಲಿಗಳು ಗುಂಪು ಗುಂಪಾಗಿ ಬಂದವು ಎಂದು ಹೇಳುತ್ತಿದ್ದಾರೆ. 
3) ಉಸಿರಾಡದೆ ನಿಂತರು ಜನರೆಲಾ
ಆಯ್ಕೆ:
– ಈ ವಾಕ್ಯವನ್ನು ನಮ್ಮ ರಾಷ್ಟ್ರಕವಿ “ಕುವೆಂಪು”ರವರು ಬರೆದಿರುವ “ಬೊಮ್ಮನ ಹಳ್ಳಿಯ ಕಿಂದರಿ ಜೋಗಿ” ಎಂಬ ಮಕ್ಕಳ ಪುಸ್ತಕದಿಂದ ಆಯ್ದ  ಅದೇ ಹೆಸರಿನ “ಕಿಂದರಿ ಜೋಗಿ” ಪದ್ಯದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:– ಬೊಮ್ಮನ ಹಳ್ಳಿಯ ಸಂದಿಗೊಂದಿನಿಂದ ಬಂದಂತಹ ಹಿಂಡು ಹಿಂಡು ಇಲಿಗಳು ಮತ್ತು ಅದನ್ನು ನೋಡಲು ಬಂದ ಜನರ ಗುಂಪು ಎಲ್ಲಾ ಹೊಳೆಯ ದಂಡೆಯ ಮೇಲೆ ಸೇರಿದರು. ಮುಂದೇನು ಆಗುವುದೋ ನೋಡಬೇಕೆಂಬ ಕಾತುರತೆಯಿಂದ ಅಷ್ಟೊಂದು ಜನರ ಗುಂಪು ಆಶ್ಚರ್ಯ ಹಾಗೂ ಕೌತುಕಗಳಿಂದ ಉಸಿರು ಬಿಗಿ ಹಿಡಿದು ನಿಂತಿರುವುದು ಎಂದು ಕವಿಯ ಆ  ದೃಶ್ಯವನ್ನು ಮನಮುಟ್ಟುವಂತೆ ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
         ಭಾಷಾಭ್ಯಾಸ

ಅ) ಕೆಳಗಿನ ಪದಗಳನ್ನು ಪ್ರಾಸದ ಜೋಡಿಗಳಾಗಿ ಸಂಗ್ರಹಿಸಿ ಬರೆಯಿರಿ.

ಹಾಡಿ – ನೋಡಿ   
ನೋಡಿದರು – ಮಾಡಿದರು     
ದಂಡು – ಹಿಂಡು   
ಗಗನದಲಿ – ಹರುಷದಲಿ
ಆ) ಕೆಳಗಿನ ಪದಗಳನ್ನು ಬಿಡಿಸಿ ಸಧಿ ಹೆಸರಿಸಿರಿ.
1.ಹಿಂಡು + ಹಿಂಡು= ಹಿಂಡ್ಹಿಂಡು – ಲೋಪ ಸಂಧಿ
2.ಕಟ್ಟೆಯನು + ಇಳಿದ = ಕಟ್ಟೆಯನಿಳಿದ – ಲೋಪ ಸಂಧಿ
3.ನಾದವದು + ಎಲ್ಲಿ = ನಾದವಿದೆಲ್ಲಿ – ಲೋಪ ಸಂಧಿ
4.ಹೆಣವಾಗು + ಅಲ್ಲಿಯೇ = ಹೆಣವಾಗಲ್ಲಿಯೆ – ಲೋಪ ಸಂಧಿ
5.ಬೆರಗು +ಆಗಿ= ಬೆರಗಾಗಿ – ಲೋಪ ಸಂಧಿ

ಇ) ಕೆಳಗಿನ ಪದಗಳಲ್ಲಿರುವ ವಿಭಕ್ತಿ ಪ್ರತ್ಯಯಗಳನ್ನು ಹೆಸರಿಸಿರಿ,
ಬೀದಿಗೆ – ಗೆ- ಚತುರ್ಥಿ ವಿಭಕ್ತಿ
ಜಗವನೆ – ಎ – ಸಂಬೋಧನಾ ವಿಭಕ್ತಿ
ಇಲಿಗಳ – ಅ – ಷಷ್ಟಿ ವಿಭಕ್ತಿ
ಗೂಡನು – ಉ – ಪ್ರಥಮ ವಿಭಕ್ತಿ
ಹೊಳೆಯಲ್ಲಿ- ಅಲ್ಲಿ – ಸಪ್ತಮಿ ವಿಭಕ್ತಿ

ಈ) ಈ ಪದಗಳನ್ನು ವಾಕ್ಯಗಳಲ್ಲಿ ಬಳಸಿ
1.ಮಣಮಣ:- ಪೂಜಾರರು ಪೂಜೆ ಮಡುವಾಗ ಮಣಮಣ ಮಂತ್ರವನ್ನು ಹೇಳುತ್ತಾರೆ.
2.ಗಜಿಬಿಜಿ :-  ಸಂತೆಯಲಿ ಜನರು ಸೇರಿ ಗಜಿಬಿಜಿಯಾಗಿರುತ್ತರೆ.
3.ಓಡೋಡಿ :- ಬಸ್ ಬಂದಾಗ ದೂರದಲ್ಲಿದ ಜನರು ಓಡೋಡಿ ಬಂದರು.
4. ಹಿಂಡ್ಹಿಂಡು:- ಹಳ್ಳಿಗಳಲ್ಲಿ ಸಾಕು ಪ್ರಾಣಿಗಳನ್ನು ಮೇಯಿಸಲು ಹಿಂಡ್ಹಿಂಡಾಗಿ  ಕರೆದುಕೊಂಡು ಹೋಗುತ್ತಾರೆ
5.ನಲಿನಲಿದು :- ಶಾಲೆಯ ಸಮಾರಂಭಗಳಲ್ಲಿ ಮಕ್ಕಳು ನಲಿನಲಿಯುತ್ತಾರೆ.
6.ಗಹಗಹಿಸು:- ವಿರಾಮದ ವೇಳೆಯಲ್ಲಿ ಹುಡುಗರು ತಮ್ಮ ಸ್ನೇಹಿತರನ್ನು ಚುಡಾಯಿಸಿ ಗಹಗಹಿಸಿ ನಗುತ್ತಿರುತ್ತಾರೆ.
7.ಬುಳುಬುಳು:-  ಹೊಳೆಯ, ದಂಡೆಯಲ್ಲಿ ಪ್ರೇಕ್ಷಕರು ತಿನಿಸುಗಳನ್ನು ಹಾಕಿದಾಗ ಮೀನುಗಳು ಬುಳುಬುಳನೆ  ಬರುತ್ತವೆ.

Related Articles

Leave a Reply

Your email address will not be published. Required fields are marked *

Back to top button