Class 8th Second Language Kannada Textbook Solutions

ಬುದ್ಧನ ಸಲಹೆ – Class 8th Second Language Kannada Textbook Solutions

ಗದ್ಯ ೧    
ಬುದ್ಧನ ಸಲಹೆ

ಕವಿ/ಲೇಖಕರ ಪರಿಚಯ:-

* ನಿರುಪಮಾ ರವರು 1933 ರಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಹೊಳವನಹಳ್ಳಿಯಲ್ಲಿ ಜನಿಸಿದರು.
* ಇವರು ಶತಮಾನದ ಮಕ್ಕಳ ಸಾಹಿತ್ಯ, ಅಮೃತಕಲಶ, ಪರಿತ್ಯಕ್ಕೆ, ಭುವನವಿಜಯ, ಭಾರತೀಯ ನಾರಿ ನಡೆದು ಬಂದ ದಾರಿ, ಭಾವಮುಖಿ, ರಣಹದ್ದು, ಅಧಿಕಾರಿಗಳ ಅವಾಂತ್ರ ಇನ್ನು ಮುಂತಾದ ಕೃತಿಗಳನ್ನು ಬರೆದಿದ್ದಾರೆ.
* ಶ್ರೀಯುತರಿಗೆ ಯೂನಿಸೆಫ್ ಮಕ್ಕಳ ಸಾಹಿತ್ಯ ಶಾಶ್ವತ ಸಂಸ್ಥೆಯ “ಸದೋದಿತಾ” ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಸಾಹಿತ್ಯ ಶಿರೋಮಣಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿಗಳು ಲಭಿಸಿವೆ.
* ‘ಬುದ್ಧನ ಸಲಹೆ’ ಕಥೆಯನ್ನು ಶತಮಾನದ ಮಕ್ಕಳ ಸಾಹಿತ್ಯ’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಪದಗಳ  ಅರ್ಥ
ಅಮೂಲ್ಯ – ಬೆಲೆಕಟ್ಟಲಾಗದ 
ಈರ್ಷೆ – ಅಸೂಯೆ: ಹೊಟ್ಟೆಕಿಚ್ಚು.
ಕವಲು – ಭಿನ್ನತೆ: ಎರಡು 
ಭಾಗಉತ್ಕಟ – ಅಧಿಕ: 
ಪ್ರಬಲವಾದತೆಪ್ಪಗಾಗು – ಸುಮ್ಮನಾಗು, ಏನೂ ತಿಳಿಯದಾಗು
ತೆಪ್ಪಗೆ – ಸುಮ್ಮನೆ: 
ಮಾತಿಲ್ಲದೆ.ದುರಾಸೆ – ಅತಿ ಆಸೆ ಕೆಟ್ಟ ಬಯಕೆ.
ನೆರೆಹೊರೆ – ಸುತ್ತಮುತ್ತದ್ವೇಷ – ಹಗೆತನ; ವೈರತ್ವ 
ವರ – ಅನುಗ್ರಹ; ಶ್ರೇಷ್ಠನಂಜಾಗು; ವಿಕೋಪಕ್ಕೆ ತಿರುಗು.
ಸುಭಿಕ್ಷೆ – ಒಳ್ಳೆಯ ಕಾಲ; 
ಸಮೃದ್ಧಿಸಲಹೆ -ಬುದ್ಧಿವಾದ; 
ಮಾರ್ಗದರ್ಶನಸ್ವಾರ್ಥ – ಸ್ವಪ್ರಯೋಜನ: ಸ್ವಹಿತ: ತನಗಾಗಿ,
ಅಸೂಯೆ – ಹೊಟ್ಟೆಕಿಚ್ಚು
●    ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿರಿ,
1. ಸಿದ್ದಾರ್ಥನ ತಂದೆಯ ಹೆಸರು ಶುದ್ದೋಧನನ
2. ವತ್ಸ ಮತ್ತು ಮಗಧ ರಾಜ್ಯಗಳ ನಡುವೆ ಹರಿಯುವನದಿ ಗಂಗಾನದಿ
3. ವತ್ಸ ಮತ್ತು ಮಗಧ ರಾಜ್ಯಗಳ ನಡುವೆ ಶಾಂತಿ ನೆಲೆಸುವಂತೆ ಮಾಡಿದವರು ಭಗವಾನ್ ಬುದ್ಧ
4. ‘ಬುದ್ಧನ ಸಲಹೆ’ ಪಾಠದ ಆಕರ ಕೃತಿ ಶತಮಾನದ ಮಕ್ಕಳ ಸಾಹಿತ್ಯ
●     ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. 

1. ಗಂಗಾನದಿ ಎಲ್ಲಿ ಹುಟ್ಟಿ ಯಾವ ಸಮುದ್ರವನ್ನು ಸೇರುತ್ತದೆ?

ಉತ್ತರ:- ಗಂಗಾನದಿ ಹೇಮಕೂಟ ಪರ್ವತದಲ್ಲಿ ಹುಟ್ಟಿ ಬಂಗಾಳ ಸಮುದ್ರವನ್ನು ಸೇರುತ್ತದೆ. 
2. ಬುದ್ಧನ ಪ್ರಕಾರ ನದಿ ನೀರಿಗಿಂತ ಹೆಚ್ಚು ಬೆಲೆಯುಳ್ಳದ್ದು ಯಾವು ಏಕೆ?
ಉತ್ತರ:-ಬುದ್ಧನ ಪ್ರಕಾರ ನದಿ ನೀರಿಗಿಂತ ಹೆಚ್ಚು ಬೆಲೆಯುಳ್ಳದ್ದು ಶಾಂತಿ, ಏಕೆಂದರೆ “ಮನುಷ್ಯ ಸುಖವಾಗಿ ಜೀವಿಸಲು ನೀರು, ಗಾಳಿ, ಆಹಾರ ಎಲ್ಲವೂ ಮುಖ್ಯವಾದಂತೆ ಶಾಂತಿಯೂ ಅಷ್ಟೇ ಮುಖ್ಯವಾಗಿದೆ.
3. ಬುದ್ಧ ದೇವನು ಹೇಳುವಂತೆ ಜೀವನದಲ್ಲಿ ಸುಖ ಶಾಂತಿ ಸಿಗಬೇಕಾದರೆ ಏನು ಮಾಡಬೇಕು?
ಉತ್ತರ:- ಬುದ್ಧ ದೇವನು ಹೇಳುವಂತೆ ಜೀವನದಲ್ಲಿ ಸುಖ, ಶಾಂತಿ ಸಿಗಬೇಕಾದರೆ ಮಾನವರು ಪರಸ್ಪರ ಹಂಚಿಕೊಳ್ಳುವ ಗುಣ ಹೊಂದಬೇಕು.
4. ವತ್ಸ ಮತ್ತು ಮಗಧ ರಾಜ್ಯದವರು ಯುದ್ಧವನ್ನು ಏಕೆ ನಿಲ್ಲಿಸಿದರು?
ಉತ್ತರ:- ಬುದ್ಧದೇವನು ಬೋಧಿಸಿದ ಶಾಂತಿಯ ಮಹತ್ವ ಅರಿತು ವತ್ಸ ಮತ್ತು ಮಗಧ ರಾಜ್ಯದವರು ಯುದ್ಧವನ್ನು ನಿಲ್ಲಿಸಿದರು.
●     ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1.ವತ್ಸ ಮತ್ತು ಮಗಧ ರಾಜ್ಯದ ಜನರು ಗಂಗಾ ನದಿಯನ್ನು ತಾಯಿಯಂತೆ ಏಕಿ ಪೂಜಿಸುತ್ತಿದ್ದರು?

ಉತ್ತರ:- ವತ್ಸ ಮತ್ತು ಮಗಧ ರಾಜ್ಯದ ನಡುವೆ ಗಂಗಾ ನದಿ ಹರಿಯುತ್ತಿತ್ತು. ಈ ನದಿಯ ನೀರಿನಿಂದ ಎರಡೂ ರಾಜ್ಯಗಳ ನೆಲ
ಸಸ್ಯಶ್ಯಾಮಲವಾಗಿತ್ತು. ಎತ್ತ ನೋಡಿದರೂ ಹಸಿರು ತುಂಬಿ ಬೆಳೆ ಬೆಳೆದು ಸುಭಿಕ್ಷದಿಂದ ಜನರು ಸುಖವಾಗಿದ್ದ ಕಾರಣ ಪಕ್ಷ ಮತ್ತು ಮಗಧ ರಾಜ್ಯದ ಜನರು ಗಂಗಾ ನದಿಯನ್ನು ತಾಯಿಯಂತೆ ಪೂಜಿಸುತ್ತಿದ್ದರು.
2. ವತ್ಸ ಮತ್ತು ಮಗಧ ರಾಜ್ಯಗಳ ನಡುವೆ ದ್ವೇಷ ಏಕೆ ಹೆಚ್ಚಾಯಿತು?
ಉತ್ತರ:- ಗಂಗಾ ನದಿಯ ಮೇಲೆ ತಮ್ಮ ಸಂಪೂರ್ಣ ಅಧಿಕಾರ ಸ್ಥಾಪಿಸುವ ಸಲುವಾಗಿ ವತ್ಸ ಮತ್ತು ಮಗಧ ರಾಜ್ಯಗಳ ಜನರಲ್ಲಿ ಕ್ರಮೇಣ ಸ್ವಾರ್ಥ ಅವರಿಸಿತು. ಈ ಕಾರಣದಿಂದಾಗಿ ಎರಡು ರಾಜ್ಯಗಳ ನಡುವೆ ದ್ವೇಷ ಹೆಚ್ಚಾಯಿತು.
3. ಬುದ್ಧನು ಹೇಳುವಂತೆ ದ್ವೇಷ ದುಃಖವನ್ನು ಹೇಗೆ ಹೆಚ್ಚಿಸುತ್ತದೆ?
ಉತ್ತರ:- ಬುದ್ಧನು ಹೇಳುವಂತೆ “ನೀವು ದ್ವೇಷದಿಂದ ದ್ವೇಷವನ್ನು ಜಯಿಸಲು ಹೋದರೆ ಕೊನೆಗೆ ನಿಮಗೆ ಉಳಿಯುವುದು ಈರ್ಪೈಯೇ, ಇವುಗಳಿಂದ ಜೀವಿಗಳಿಗೆ ದುಃಖವೇ ಹೊರತು ಸುಖವಲ್ಲ. ಈಗ ಸುಖವಾಗಿರುವ ನೀವು ದುಃಖ ತಂದುಕೊಳ್ಳುವ ಮಾರ್ಗ ಇದು” ಎಂದರು.
4. ವತ್ಸ ಮತ್ತು ಮಗಧ ರಾಜ್ಯದವರಿಗೆ ಸುಖಶಾಂತಿಯ ಮಹತ್ವವನ್ನು ಬುದ್ಧನು ಹೇಗೆ ಬೋಧಿಸಿದನು?
ಉತ್ತರ:- ಮನುಷ್ಯ ಸುಖವಾಗಿ ಜೀವಿಸಲು ನೀರು, ಗಾಳಿ, ಆಹಾರ ಎಲ್ಲವೂ ಮುಖ್ಯವಾದಂತೆ ಶಾಂತಿಯ ಮಾಡಿಕೊಳ್ಳುವುದನ್ನು ಬಿಟ್ಟು ವಿವೇಕ ತಂದುಕೊಂಡು ಸುಖವಾಗಿರಿ, ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ. ಆ ವರವನ್ನು ಸರ್ವಮಾನವರೂ ಸಮಾನವಾಗಿ ಹಂಚಿಕೊಂಡಾಗ ಎಲ್ಲರಿಗೂ ಸುಖ ಶಾಂತಿ ಸಿಗುತ್ತದೆ” ಎಂದು ಬುದ್ಧನು ಬೋಧಿಸಿದನು.
5. ಬುದ್ಧ ದೇವನು ವತ್ಸ ಮತ್ತು ಮಗಧ ರಾಜ್ಯಗಳ ನಡುವಿನ ಯುದ್ಧವನ್ನು ಏಕೆ ತಪ್ಪಿಸಿದನು?
ಉತ್ತರ:- ಸರ್ವರಿಗೂ ಮೀಸಲಾಗಿರುವ ನೆಲ, ಜಲಗಳನ್ನು ಹಂಚಿಕೊಡಾಗ ಮಾನವರು ವಿವೇಕವನ್ನು ಕಳೆದುಕೊಂಡು ಯುದ್ಧಕ್ಕೆ ಸನ್ನದ್ಧರಾಗುತ್ತಾರೆ, ಈ ಯುದ್ಧಗಳಿಂದ ಅಪಾರ ಸಾವು ನೋವು ಉಂಟಾಗಿ ಬದುಕು ನರಕವಾಗಿ ಬಿಡುತ್ತದೆ ಎಂಬ ಸತ್ಯವನ್ನು ಮರೆತು ಬಿಡುತ್ತಾರೆ. ಅದಕ್ಕಾಗಿ ಬದುಕಲು ಗಾಳಿ, ನೀರು, ಆಹಾರದಂತೆ ಸುಖ, ಶಾಂತಿ, ನೆಮ್ಮದಿ ಅಗತ್ಯವಾಗಿ ಬೇಕು ಎಂದು ಅರಿತ ಬುದ್ಧದೇವನು ಯುದ್ಧವನ್ನು ತಪ್ಪಿಸಿದನು.
●    ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. ವತ್ಸ ಮತ್ತು ಮಗಧ ರಾಜ್ಯಗಳು ಯುದ್ಧ ಮರೆತು ಶಾಂತಿಯಿಂದ ನೆಲೆಸಿದುದು ಹೇಗೆ?

ಉತ್ತರ:- ವತ್ಸ ಮತ್ತು ಮಗಧ ರಾಜ್ಯಗಳು ಗಂಗಾನದಿಯ ಮೇಲೆ ತಮ್ಮ ಹಕ್ಕು ಸ್ಥಾಪಿಸುವ ಸಲುವಾಗಿ ದ್ವೇಷ, ಅಸೂಯೆಗಳಿಂದ ಪರಸ್ಪರ ಹೋರಾಟಕ್ಕೆ ಸಿದ್ಧರಾದರು. ಆ ಸಮಯದಲ್ಲಿ ಬುದ್ಧದೇವನು ಆಗಮಿಸಿ ಇಬ್ಬರೂ ರಾಜ ಮಂತ್ರಿಗಳಿಗೆ ನದಿಯ ನೀರು ಮಾನವನ ರಕ್ತಗಳಲ್ಲಿ ಯಾವುದಕ್ಕೆ ಬೆಲೆ ಹೆಚ್ಚು ಎಂದು ಕೇಳಿದರು. ಆಗ ಮಂತ್ರಿಗಳು ರಕ್ಷವೆಂಬ ಉತ್ತರ ಕೊಟ್ಟರು. ಹಾಗಾದರೆ ನದಿ ನೀರಿಗಾಗಿ ಅಮೂಲ್ಯವಾದ ರಕ್ತ ಹರಿಸಲು ಏಕೆ ಸಿದ್ಧರಾಗಿದ್ದೀರಿ? ಜೀವಿಸಬೇಕೆಂದ ಮೇಲೆ ಸಾಯಲೇಕೆ ಯುದ್ಧವನ್ನು ಆರಿಸಿಕೊಂಡಿದ್ದೀರಿ? ಇವೆಲ್ಲವನ್ನು ಬಿಟ್ಟು ಶಾಂತಿ ಬೆಳೆಸಿಕೊಳ್ಳಿ, ವಿವೇಕದಿಂದ ವರ್ತಿಸಿರಿ, ಪ್ರಕೃತಿ ಸಂಪತ್ತನ್ನು ಹಂಚಿಕೊಂಡಾಗ ಎಲ್ಲರಿಗೂ ಸುಖ, ಶಾಂತಿ ಸಿಗುತ್ತದೆ ಎಂದು ಬುದ್ಧದೇವ ತಿಳಿಸಿದಾಗ ವತ್ಸ ಮತ್ತು ಮಗಧ ರಾಜ್ಯಗಳು ಯುದ್ಧ ಮರೆತು ಶಾಂತಿಯಿಂದ ನೆಲೆಸಿದರು. 
2. ಬದುಕಿನಲ್ಲಿ ಸುಖ ಶಾಂತಿ ನೆಮ್ಮದಿಗಳನ್ನು ಕಂಡುಕೊಳ್ಳುವುದು ಹೇಗೆ? ಚರ್ಚಿಸಿ.
ಉತ್ತರ:- ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಗಳನ್ನು ಕಂಡುಕೊಳ್ಳಲು ಮಾನವರು ಕೊಡಮಾಡಿದ ಪ್ರಾಕೃತಿಕ ಸಂಪತ್ತನ್ನು ಬಳಸಿಕೊಂಡು ಸಮೃದ್ಧಿಯ ಜೀವನ ನಡೆಸಬೇಕು. ಇಲ್ಲದಿದ್ದರೆ ಸ್ವಾರ್ಥ, ದ್ವೇಷ, ತುಂಬಿದ ದುರಾಸೆ ಬದುಕು ನಮ್ಮನ್ನು ನಾಶಮಾಡುತ್ತದೆ. ಎಲ್ಲ ಕಾಲದಲ್ಲಿಯೂ ಪರಿಸ್ಥಿತಿಯನ್ನು ಅರಿತು ಬದುಕಬೇಕು.ಒಳಿತು ಕೆಡುಕುಗಳ ಬಗ್ಗೆ ತಾಳ್ಮೆಯಿಂದ ತೀರ್ಮಾನ ಕೈಗೊಳ್ಳಬೇಕು. ಪರಸ್ಪರ ಹಂಚಿಕೊಂಡು ತಿನ್ನುವ, ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವ, ಏವೇಕದಿಂದ ವರ್ತಿಸುವ ಸೌಹಾರ್ದಯುತವಾಗಿ ಬಾಳುವ, ಶಾಂತಿಯು ನೆಲೆಸುವಂತೆ ಮಾಡುವುದರಿಂದ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಗಳನ್ನು ಕಂಡುಕೊಳ್ಳಬಹುದು.
●    ಸಂದರ್ಭದೊಡನೆ ವಿವರಿಸಿ.

1. ‘ಮನುಷ್ಯನ ರಕ್ತ ನದಿ ನೀರಿಗಿಂತ ಬೆಲೆಯುಳ್ಳದ್ದು.’
ಆಯ್ಕೆ
:- ಈ ವಾಕ್ಯವನ್ನು “ನಿರುಪಮಾ” ಅವರು ಬರೆದಿರುವ’ಶತಮಾನದಮಕ್ಕಳಸಾಹಿತ್ಯ’ಎಂಬ ಕೃತಿಯಿಂದ ಆಯ್ದ”ಬುದ್ಧನ ಸಲಹೆ” ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ವತ್ಸ ಮತ್ತು ಮಗದ ರಾಜ್ಯದ ಜನರು ಭಗವಾನ್ ಬುದ್ಧದೇವನಿಗೆ ಹೇಳುತ್ತಾರೆ.  ಎರಡು ರಾಜ್ಯದ ಜನರು ನದಿ ನೀರಿಗಾಗಿ ಯುದ್ಧಕ್ಕೆ ಸಿದ್ಧರಾದಾಗ ಬುದ್ಧನು ‘ ನದಿಯ ನೀರು ಮಾನವನ ರಕ್ತ ಇವೆರಡರಲ್ಲಿ ಯಾವುದಕ್ಕೆ ಹೆಚ್ಚು ಬೆಲೆಯಿದೆ’ ಎಂದು ಪ್ರಶ್ನಿಸಿದಾಗ ಎರಡೂ ರಾಜ್ಯದ ಜನರು ‘ಮನುಷ್ಯನ ರಕ್ತ ನದಿ ನೀರಿಗಿಂತಲೂ ಬೆಲೆಯುಳ್ಳದ್ದು’ ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
2. ‘ನೀವು ಜೀವಿಸಬೇಕೆಂದಿದ್ದೀರಲ್ಲವೆ? ಮತ್ತೆ ಸಾಯಲೇಕೆ ಸಿದ್ಧರಾಗಿದ್ದೀರಿ?’
ಆಯ್ಕೆ:-
ಈ ವಾಕ್ಯವನ್ನು “ನಿರುಪಮಾ” ಅವರು ಬರೆದಿರುವ  ‘ಶತಮಾನದಮಕ್ಕಳಸಾಹಿತ್ಯ’ಎಂಬ ಕೃತಿಯಿಂದ ಆಯ್ದ”ಬುದ್ಧನ ಸಲಹೆ” ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ವತ್ಸ ಮತ್ತು ಮಗದ ರಾಜ್ಯದ ಜನರು ಭಗವಾನ್ ಬುದ್ಧದೇವನಿಗೆ ಹೇಳುತ್ತಾರೆ. ಪ್ರಕೃತಿ ಸರ್ವಮಾನವರಿಗೂ ನೀಡಿರುವ ಎಲ್ಲ ವಸ್ತುಗಳನ್ನು ಸಮಾನವಾಗಿ ಹಂಚಿಕೊಂಡಾಗ ಎಲ್ಲರಿಗೂ ಸುಖ ಶಾಂತಿ ಸಿಗುತ್ತದೆ. ‘ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ.’ ಎಂದು ಬುದ್ಧನು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ. 
3. ‘ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ.’
ಆಯ್ಕೆ
:- ಈ ವಾಕ್ಯವನ್ನು “ನಿರುಪಮಾ” ಅವರು ಬರೆದಿರುವ ಶತಮಾನದಮಕ್ಕಳಸಾಹಿತ್ಯ’ಎಂಬಕೃತಿಯಿಂದಆಯ್ದ”ಬುದ್ಧನ ಸಲಹೆ” ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ವತ್ಸ ಮತ್ತು ಮಗದ ರಾಜ್ಯದ ಜನರು ಭಗವಾನ್ ಬುದ್ಧದೇವನಿಗೆ ಹೇಳುತ್ತಾರೆ.  ಪ್ರಕೃತಿ ಸರ್ವಮಾನವರಿಗೂ ನೀಡಿರುವ ಎಲ್ಲ ವಸ್ತುಗಳನ್ನು ಸಮಾನವಾಗಿ ಹಂಚಿಕೊಂಡಾಗ ಎಲ್ಲರಿಗೂ ಸುಖ ಶಾಂತಿ ಸಿಗುತ್ತದೆ. ‘ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ.’ ಎಂದು ಬುದ್ಧನು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
ಭಾಷಾಭ್ಯಾಸ
 
●    ‘ಬುದ್ಧನ ಸಲಹೆ’ ಪಾಠದಲ್ಲಿ ಅನುಸ್ವಾರ ವಿಸರ್ಗಗಳಿಂದ ಕೂಡಿರುವ ಪದಗಳನ್ನು ಆಯ್ದು ಬರೆಯಿರಿ.
ಉದಾ : ಗಂಗಾ, ಒಂದು, ದುಃಖ, ಪುನಃ, ಹಿಂದಿನ ಕಪಿಲವಸ್ತುವೆಂಬ ಶಾಕ್ಯರೆಂಬ.ಎಂಬ, ನಂತರ, ಬಂಗಾಳ, ಇಂದ, ಅಂತೆ, ತುಂಬಿ, ಸಂಪೂರ್ಣ ಉಂಟಾಯಿತು. ಬಂದ, ನಿಂತುಕೊಂಡ, ಮಂತ್ರಿ, ಎಂದು, ಶಾಂತಿ, ತಂದುಕೊಂಡು, ಅ೦ದಿನಿಂದ, ಸ್ನೇಹದಿಂದ.
●    ಕೆಳಗಿನ ಪದಗಳಿಗೆ ವಿರುದ್ಧಾರ್ಥ ಬರೆಯಿರಿ.
ಮೌಲ್ಯ X ಅಪಮೌಲ್ಯ
ಸುಖ X ದುಃಖ
ವರ X ಶಾಪ, ಸತ್ಯ X ಅಸತ್ಯ, ಪವಿತ್ರ X ಅಪವಿತ್ರ, ಸ್ವಾರ್ಥ X ನಿಸ್ವಾರ್ಥ

Related Articles

Leave a Reply

Your email address will not be published. Required fields are marked *

Back to top button